October 19, 2026

Ayudha Pooja Celebration

Kala Sinchana Cultural Forum of Sri Adichunchanagiri First Grade College, Channarayapatna, organized Ayudha Pooja on 19 October 2026 at 4:00 p.m. on the college campus. The pooja was performed for the instruments, equipment and tools used in the institution as a mark of respect and gratitude for their contribution to academic and institutional activities. The celebration reflected the cultural significance of Ayudha Pooja, which symbolizes respect for the tools and instruments that support our work and progress. The programme promoted traditional values, devotion, gratitude and respect for work among the staff and the college community.

The event was organized under the guidance of Dr. Manjunath M K, the Principal and Bhaskara J, Physiacal Education Director, coordinated by Dr. Nirupama M., Convener, Kala Sinchana Cultural Forum. The celebration concluded with a spirit of devotion and cultural harmony.

ಆಯುಧ ಪೂಜೆ ಆಚರಣೆ

ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು, ಚನ್ನರಾಯಪಟ್ಟಣದ ಕಲಾ ಸಿಂಚನ ಸಾಂಸ್ಕೃತಿಕ ವೇದಿಕೆಯ ವತಿಯಿಂದ ದಿನಾಂಕ 19-10-2026 ರಂದು ಸಂಜೆ 4:00 ಗಂಟೆಗೆ ಕಾಲೇಜಿನ ಆವರಣದಲ್ಲಿ ಆಯುಧ ಪೂಜೆಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.

ಸಂಸ್ಥೆಯ ಶೈಕ್ಷಣಿಕ ಹಾಗೂ ದೈನಂದಿನ ಚಟುವಟಿಕೆಗಳಿಗೆ ಸಹಕಾರಿಯಾಗಿರುವ ವಿವಿಧ ಉಪಕರಣಗಳು, ಯಂತ್ರಗಳು ಮತ್ತು ಸಲಕರಣೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಅವುಗಳ ಮಹತ್ವ ಮತ್ತು ಕೊಡುಗೆಯನ್ನು ಸ್ಮರಿಸಲಾಯಿತು. ದುಡಿಮೆಯ ಸಾಧನಗಳನ್ನು ಗೌರವಿಸುವುದು, ಕೃತಜ್ಞತೆ ಸಲ್ಲಿಸುವುದು ಹಾಗೂ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಮಹತ್ವವನ್ನು ಈ ಆಚರಣೆಯು ಸಾರಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಕೆ. ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಜೆ. ಭಾಸ್ಕರ್ ಅವರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಲಾ ಸಿಂಚನ ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಡಾ. ನಿರುಪಮಾ ಎಂ. ಅವರು ಕಾರ್ಯಕ್ರಮದ ಸಂಯೋಜನೆ ಮಾಡಿದರು.

ಕಾರ್ಯಕ್ರಮವು ಭಕ್ತಿ, ಶ್ರದ್ಧೆ, ಕೃತಜ್ಞತೆ ಹಾಗೂ ಸಾಂಸ್ಕೃತಿಕ ಸೌಹಾರ್ದತೆಯೊಂದಿಗೆ ಸಂಪನ್ನಗೊಂಡಿತು.